ವಾಸ್ತವ ಸತ್ಯ -ಹೊಗಳಿಕೆ ತೆಗಳಿಕೆ:

ವಾಸ್ತವ ಸತ್ಯ -ಹೊಗಳಿಕೆ ತೆಗಳಿಕೆ: 


ಹೊಗಳಿಕೆಗೆ ಹಿಗ್ಗದೆಯೆ,ತೆಗಳಿಕೆಗೆ ಕುಗ್ಗದೆಯೆ ಸತ್ವ ಗುಣಯುತರಾಗಿ ಸಾಗುತಿರಿಮುಂದೆ:

ಪಿಂದಣದಿ ಘಟಿಸಿರುವ ಸನ್ನಿವೇಶವ ನೆನೆದು,ಕೊರಗುತ್ತ ಕುಳ್ಳಿರದೆ ಚರಿಸುತಿರಿ ಮುಂದೆ:

ಅವಶ್ಯಕತೆ ಇರುವಾಗ ಮುಂದಣದಿ ಹೊಗಳುತ್ತ,ಕಾಯಕವ ಸಾಧಿಸುತ ಹಿಂದೆ ತೆಗಳುವರಿಹರು:

ಹೊಗಳಿಕೆಯ ಬಯಸುತ್ತ ಕಾರ್ಯ ಮಾಡುವರಿಹರು,ತೆಗಳಿಕೆಯ ಎಂದೆಂದೂ ಸಹಿಸರವರು:

ಬದುಕಿನಲಿ ಬದ್ಧತೆಯು ಸ್ಥಿರತೆಯಲ್ಲಿರುವಾಗ,ನಯವಂಚಕರ ಆಟ ನಡೆಯದದು ಬದ್ಧ:

ಆತ್ಮಸಾಕ್ಷಿಗೆ ತಾವು ವಂಚಿಸದೆ ನಡೆಯುತಿರೆ,ಅನವರತ ರಕ್ಷಿಪನು ಹರಿ ಒಲುಮೆಯಿಂದ: 


ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget